Sat. Jan 22nd, 2022

ಪಾಂಡವ ನ್ಯೂಸ್

ಸಮಾಜದ ಧ್ವನಿ

ರಾಣೇಬೆನ್ನೂರು ಚೌಡೇಶ್ವರಿ ದೇವಿ ಜಾತ್ರೇಲಿ ಜೂಜು… ಕಂಡೂ ಕಾಣದಂತಿರುವ ಆರಕ್ಷಕರು….

1 min read

ರಾಣೇಬೆನ್ನೂರು : ಇತ್ತೀಚಿನ ಒಂದು ವರ್ಷದಿಂದ ರಾಜ್ಯ, ದೇಶ, ಪ್ರಪಂಚವೇ ಕರೋನಾದಿಂದ ಬೇಸತ್ತಿದ್ದು, ಇದರಿಂದಾಗಿ ಸಾರ್ವಜನಿಕರು ಗುಂಪಾಗಿ ಸೇರುವಂತಿಲ್ಲ ಹಾಗೂ ಸೇರಲಾರರು. ಪುರಾಣ ಪ್ರಸಿದ್ಧ ನಮ್ಮ ರಾಣೇಬೆನ್ನೂರು ಶ್ರೀ ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವವು ಜ.25 ರಿಂದ ಬಹು ವಿಜೃಂಭಣೆಯಿಂದ ನೆರೆವೇರುತ್ತಿದೆ.

ಈ ಜಾತ್ರಾ ಮಹೋತ್ಸವದಲ್ಲಿ ಕರೋನಾ ನಡುವೆಯೂ, ಇದ್ಯಾವುದನ್ನೂ ಲೆಕ್ಕಿಸದೇ ಜಾತ್ರೆ ಭಕ್ತರಿಂದ ತುಂಬಿಕೊಂಡಿದೆ. ಜಾತ್ರೆ ಅಂದಮೇಲೆ ಮಕ್ಕಳ ವಿವಿಧ ಆಟಗಳು, ಅಂಗಡಿಗಳು ಇರುವುದಂತೂ ಸಹಜ…. ಆದರೆ ಈ ಜಾತ್ರಾ ಮಹೋತ್ಸವದಲ್ಲಿ ಈ ಅಂಗಡಿ-ಮುಗ್ಗಟ್ಟುಗಳ ನಡುವೆ ದುಡ್ಡು ಮಾಡಬೇಕೆಂಬ ದುರಾಸೆಯಿಂದ (ಗ್ಯಾಂಬ್ಲಿಂಗ್) ಜೂಜು ಆಟಗಳು ನಡೆಯುತ್ತಿವೆ.. ಸಾರ್ವಜನಿಕರಿಗೇನಾದರೇನು ನಮಗೆ ಈ ಜೂಜಿನಾಟದಿಂದ ದುಡ್ಡು ಬಂದರಷ್ಟೇ ಸಾಕು.. ಎನ್ನುವಂತಿದೆ. ಇದರಿಂದಾಗಿ ಜಾತ್ರೇಲಿ ಗಲಾಟೆ ನಡೆಯುವ ಸಾಧ್ಯತೆಯೂ ಹೆಚ್ಚಿದೆ… ಇದನ್ನು ಏಕೆ ನಮ್ಮ ರಾಣೇಬೆನ್ನೂರು ಆರಕ್ಷಕರು ತಡೆಯುತ್ತಿಲ್ಲ.. ಅಥವಾ ಕಂಡೂ ಕಾಣದಂತೆ ಸುಮ್ಮನಿರುವರಾ… ಅಥವಾ ಈ ಜೂಜುಕೋರರೇ ಆರಕ್ಷಕರಿಗೆ ತಿಳಿಯದಂತೆ ನಡೆಸುತ್ತಿರುವರೇ.. ಅಥವಾ ಆರಕ್ಷಕರಿಗೇನು ಮಾಮೂಲೆ ಕೊಡುತ್ತಿರಬಹುದೇ ಎಂದು ಜಾತ್ರೆಗೆ ಆಗಮಿಸಿದ ನಾಗರೀಕರು ಬೇಸರದಿಂದ ನುಡಿದಿದ್ದಾರೆ.

  •  
  •  
  •  
  •  
  •  
  •  

Leave a Reply

Your email address will not be published. Required fields are marked *

Copyright © All rights reserved. | Developed by EXPOLOG TECHNOLOGIES
error: Content is protected !!