Wed. Jan 19th, 2022

ಪಾಂಡವ ನ್ಯೂಸ್

ಸಮಾಜದ ಧ್ವನಿ

ಪಠ್ಯೇತರ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳ ಭಾಗವಹಿಸುವಿಕೆ ಮುಖ್ಯ

??

ಪಾಂಡವನ್ಯೂಸ್,ರಟ್ಟೀಹಳ್ಳಿ : ತಾಲೂಕಿನ ಮಾಸೂರು ಗ್ರಾಮದಲ್ಲಿರುವ ಸ್ವಾಮಿ ವಿವೇಕಾನಂದ ಸಿಬಿಎಸ್‍ಇ ಹಾಗೂ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಠ್ಯೇತರ ಚಟುವಟಿಕೆಗಳ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕಿ ನಂದಿನಿ ಹೆಚ್ ಜಿ ವಹಿಸಿ ಮಾತನಾಡಿದ ಅವರು ಇಂದಿನ ವಿದ್ಯಾರ್ಥಿಗಳು ಕೇವಲ ಪಾಠದ ಕಡೆ ಗಮನಕೊಡೆದೇ ಪಠ್ಯೇತರ ಚಡುವಟಿಕೆಗಳಲ್ಲೂ ಕೂಡಾ ಗಮನಹರಿಸಬೇಕು ಇದರಿಂದ ವಿದ್ಯಾರ್ಥಿಗಳ ಕ್ರಿಯಾಶೀಲತೆ ಹೆಚ್ಚಾಗುತ್ತದೆ ಎಂದರು.ಪಾಠದಲ್ಲಿ ಬರುಬ ಕ್ರಿಯಾ ಚಟುವಟಿಕೆಗಳನ್ನು ನಾವು ವಿದ್ಯಾರ್ಥಿಗಳಿಗೆ ಅರ್ಥೈಸಿ ಆ ಕ್ರಿಯಾ ಚಟುವಟಿಕೆಗಳನ್ನು ಮಾಡಿಕೊಂಡು ವಿದ್ಯಾರ್ಥಿಗಳಿಗೆ ಹೇಳಿದರೆ ಇನ್ನೂ ಆಳವಾಗಿ ಆ ವಿದ್ಯಾರ್ಥಿಗಳು ವಿಷಯವನ್ನು ಗ್ರಹಿಸುತ್ತಾರೆ ಎಂದರು.

ಒಂದನೇ ತರಗತಿಯಿಂದ 3ನೇ ತರಗತಿಯವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಕ್ರಿಯಾ ಚಟುವಟಿಕೆ ಮಾಡಿಕೊಂಡು ಬರಲು ತಿಳಿಸಿದ್ದು ಅದರಂತೆ ಎಲ್ಲಾ ವಿದ್ಯಾರ್ಥಿಗಳು ಕೂಡಾ ವಿಭಿನ್ನವಾದಂತಹ ಮನೆಗಳು, ಹಾಗೂ ಶಾಲೆ ಮತ್ತು ಸ್ವಚ್ಛ ಭಾರತ ಮಾದರಿಯ ಅನೇಕ ಚಟುವಟಿಕಳನ್ನು ಮಾಡಿಕೊಂಡು ಬಂದಿದ್ದರು.

??

ಈ ಸಂದರ್ಬದಲ್ಲಿ ಪ್ರತಿಕಾ ಶೆಟ್ಟಿ. ಮಂಗಳಾ,ಅನುಪಮಾ ಕೆ, ಸುಮಾ, ಶಿಲ್ಪಾ ಹೆಚ್ ಬಿ ಹಾಗೂ ಎಲ್ಲಾ ವಿದ್ಯಾರ್ಥಿಗಳು ಹಾಜರಿದ್ದರು.

  •  
  •  
  •  
  •  
  •  
  •  

Leave a Reply

Your email address will not be published. Required fields are marked *

Copyright © All rights reserved. | Developed by EXPOLOG TECHNOLOGIES
error: Content is protected !!