Wed. Jan 19th, 2022

ಪಾಂಡವ ನ್ಯೂಸ್

ಸಮಾಜದ ಧ್ವನಿ

ಚೈಲ್ಡ್‍ಲೈನ್ ಸೇ ದೋಸ್ತಿವೀಕ್(ಮಕ್ಕಳ ಸ್ನೇಹಿ ಸಪ್ತಾಹ) 5 ನೇ ದಿನದ ಕಾರ್ಯಕ್ರಮ

1 min read

ರಾಣೇಬೆನ್ನೂರು : ಮಕ್ಕಳು ಆನಲೈನೆ ಗೆ ಮಾರುಹೊಗದೆ ತಮ್ಮ ಬವಿಷ್ಯದ ಬಗ್ಗೆ ಗಮನಹರಿಸಬೇಕೆಂದು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅದ್ಯಕ್ಷರಾದ ಎಸ್ ಹೆಚ್ ಮಜೀದ ಹೇಳಿದರು. ಅವರು ಚೈತನ್ಯ ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ಮಕ್ಕಳ ಸಹಾಯವಾಣಿ ಕೇಂದ್ರದ ವತಿಯಿಂದ ಹಮ್ಮಿಕೊಂಡ ಚೈಲ್ಡ್‍ಲೈನ್ ಸೇ ದೋಸ್ತಿವೀಕ್ ಕಾರ್ಯಕ್ರಮದ ನಿಮಿತ್ಯ ಕರ್ನಾಟಕ ಪಬ್ಲಿಕ ಸ್ಕೂಲ್ ಅರೇಮಲ್ಲಾಪುರದಲ್ಲಿ ಹಮ್ಮಿಕೊಂಡಿದ್ದ ಪೋಕ್ಸೋ ಮತ್ತು ಬಾಲ್ಯವಿವಾಹ ಕುರಿತು ಅರಿವು ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡಿದರು. ಮಕ್ಕಳ ರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಮತ್ತು ಮಕ್ಕಳು ತಮಗೆ ತೊಂದರೆಯಾದಲ್ಲಿ ಮಕ್ಕಳ ಸಹಾಯವಾಣಿ 1098 ಕ್ಕೆ ಕರೆ ಮಾಡಿ ತಿಳಿಸಬಹುದು.
ಇಂದಿನ ಮಕ್ಕಳು ಇಂದಿನ ಪ್ರಜೆಗಳು ಎಂದರು ಬಾಲ್ಯ ವಿವಾಹ ನಿಷೇದ ಕಾಯ್ದೆ-2006 ರ -ಪ್ರಕಾರ 18 ವರ್ಷದೊಳಗಿನ ಹೆಣ್ಣು ಮಗು ಮತ್ತು 21 ವರ್ಷದೊಳಗಿನ ಗಂಡು ಮದುವೆಯಾರದೆ ಅದನ್ನು ಬಾಲ್ಯವಿವಾಹ ಎನ್ನುತ್ತೇವೆ. ಬಾಲ್ಯವಿವಾಹ ಮಾಡಿದರೆ 2ವರ್ಷ ಜೈಲು ಮತ್ತು 1 ಲಕ್ಷ ದಂಡವಿದೆ. ಬಾಲ್ಯವಿವಾಹ ಮಾಡುವುದು ತಿಳಿದು ಬಂದಲ್ಲಿ ಬಾಲ್ಯ ವಿವಾಹ ನಿಷೇದಾಧಿಕಾರಿಗಳಿಗೆ ಅಥವಾ ಮಕ್ಕಳ ಸಹಾಯವಾಣಿ (1098) ಕ್ಕೆ ಕರೆ ಮಾಡಿ ತಿಳಿಸಿ ಎಂದರು.
ಮುಖ್ಯ ಅತಿಥಿಗಳಾದ ಶ್ರೀಮತಿ ಗೀತಾ ಪಾಟೀಲ್ ನಿರ್ದೇಶಕರು ಮಕ್ಕಳ ಸಹಾಯವಾಣಿ ಇವರು ಮಾತನಾಡುತ್ತ ಶಿಕ್ಷಣ ಇಲ್ಲದಿದ್ದರೆ ಎನೂ ಸಾಧನೆ ಮಾಡಲು ಸಾದ್ಯವಿಲ್ಲ ಮಕ್ಕಳಿಗೆ ಶಿಕ್ಷಣ ಬಹಳ ಅವಶ್ಯಕ ಮಕ್ಕಳನ್ನು ರಕ್ಷಿಸುವುದು ಎಲ್ಲರ ಜವಾಬ್ದಾರಿ, ಹುಟ್ಟಿದ ಎಲ್ಲಾ ಮಕ್ಕಳಿಗೆ ಬಾಲ್ಯ, ಶಿಕ್ಷಣ, ಅಕ್ಕರೆ ತುಂಬಿದ ಪ್ರೀತಿ ನೀಡುವುದು ಸಮಾಜ/ಸರಕಾರದ ಜವಾಬ್ದಾರಿಯಾಗಿದೆ, ಮಕ್ಕಳ ಅಂತರ್ ಜಾಲದ ವ್ಯಾಮೋಹಕ್ಕೆ ಮಾರುಹೊಗದೇ ಸುರಕ್ಷಿತ ವಾಗಿರಬೇಕು ಎಂದರು.
ರಾಮಲಿಂಗೇಶ ಕಳಸೂರ ಕ್ಲರ್ಕ ಗ್ರಾಮ ಪಂಚಾಯತಿ ಅರೇಮಲ್ಲಾಪುರ ಮಕ್ಕಳು ತಮ್ಮ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಹಾಗು ಸ್ಮಾರ್ಟ ಪೋನಗಳನ್ನು ಒಳ್ಳೆಯ ಕೇಲಸಕ್ಕೆ ಮಾತ್ರ ಬಳಕೆಮಾಡಿ ಆನಲೈನ ಗೆ ಮಾರುಹೊಗಿ ತೊಂದರೆಗೆ ಒಳಗಾಗಬೇಡಿ ಎಂದು ಮಕ್ಕಳಿಗೆ ಕಿವಿ ಮಾತು
ಮಾರುತಿ ಹರಿಜನ ಮಕ್ಕಳ ಸಹಾಯವಾಣಿ ಸಿಬ್ಬಂದಿ ಮಾರುತಿ ಹರಿಜನ ಮಕ್ಕಳ ಸಹಾಯವಾಣಿ ಸಿಬ್ಬಂದಿ ಬಾಲ್ಯವಿವಾಹ ಮತ್ತು ಪೋಕ್ಸೋ ಬಗ್ಗೆ ಉಪನ್ಯಾಸ ನೀಡಿದರು ಸೈನಾಜ ಚಿಟ್ಟಿ ಸ್ವಾಗತಿಸಿದರು ನಾಗರಾಜ ಕುರಿಯವರ ವಂದಿಸಿದರು. ಕಾಂತೇಶ ಭಜೆಂತ್ರಿ ವೈದ್ಯಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ ಅರೇಮಲ್ಲಾಪುರ ಮತ್ತು ಶಾಲಾ ಮುಖ್ಯೋಪಾದ್ಯಾಯರಾದ ರಮೇಶ ಚಲವಾದಿ ಹಾಗೂ ಸಿಬ್ಬಂದಿ ವರ್ಗ ಮತ್ತು 200 ಕ್ಕು ಹೆಚ್ಚು ವಿದ್ಯಾರ್ಥಿಗಳು ಪಾಲ್ಗೋಂಡಿದ್ದರು.

  •  
  •  
  •  
  •  
  •  
  •  

Leave a Reply

Your email address will not be published. Required fields are marked *

Copyright © All rights reserved. | Developed by EXPOLOG TECHNOLOGIES
error: Content is protected !!