Sat. Jan 22nd, 2022

ಪಾಂಡವ ನ್ಯೂಸ್

ಸಮಾಜದ ಧ್ವನಿ

ಮಕ್ಕಳ ಸ್ನೇಹಿ ಸಪ್ತಾಹ

1 min read

ರಾಣೇಬೆನ್ನೂರು : 18 ವರ್ಷದೊಳಿಗಿನ ವಯಸ್ಸಿನವರನ್ನು ಮಕ್ಕಳು ಎನ್ನುವರು ಇಂತಹ ಮಕ್ಕಳಿಗಾಗಿ ವಿಶ್ವಸಂಸ್ಥೆಯು 1989 ನವ್ಹಂಬರ್ -20 ಮಕ್ಕಳ ಹಕ್ಕುಗಳು ಒಡಂಬಡಿಕೆ ಜಾರಿಗೆ ಬಂದಿದೆ ಆ ಒಡಂಬಡಿಕೆಗೆ ಭಾರತವು ಸಹ ಸಹಿ ಹಾಕಿದೆ. ಮಕ್ಕಳ ಹಕ್ಕುಗಳೆಂದರೆ ಬದುಕುವ ಹಕ್ಕು, ರಕ್ಷಣೆ ಹಕ್ಕು ವಿಕಾಸ ಹೊಂದುವ ಹಕ್ಕು ಮತ್ತು ಬಾಗವಹಿಸುವ ಹಕ್ಕು ಈ ಹಕ್ಕುಗಳಿಂದ ವಂಚಿತ ಆಗಬಾರದು ಎಂದು ಶ್ರೀಮತಿ ಜಯಶ್ರೀ ಪಾಟೀಲ್ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ರಾಣೇಬೆನ್ನೂರ ರವರು ಹೇಳಿದರು. ಚೈತನ್ಯ ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ಮಕ್ಕಳ ಸಹಾಯವಾಣಿ ಕೇಂದ್ರದ ವತಿಯಿಂದ ಹಮ್ಮಿಕೊಂಡ ಚೈಲ್ಡ್‍ಲೈನ್ ಸೇ ದೋಸ್ತಿವೀಕ್ ಕಾರ್ಯಕ್ರಮದ ನಿಮಿತ್ಯ ಸರಕಾರಿ ಪ್ರೌಢ ಶಾಲೆ ಹೊನ್ನತ್ತಿಯಲ್ಲಿ ಹಮ್ಮಿಕೊಂಡಿದ್ದ ಆನಲೈನ್ ಸುರಕ್ಷತೆ ಮತ್ತು ಪೋಕ್ಸೋ ಕಾಯ್ದೆ ಕುರಿತ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು
ಮತ್ತು 18 ವರ್ಷದ ಒಳಗಿನ ಹುಡುಗಿ ಮತ್ತು 21 ವರ್ಷದ ಒಳಗಿನ ಹುಡುಗ ಮದುವೆಯಾದರೆ ಅದು ಬಾಲ್ಯವಿವಾಹವಾಗಿದೆ ಅದು ಕಾನೂನು ಪ್ರಕಾರ ಅಪರಾಧವಾಗಿದೆ ಎಂದು ತಿಳಿಸಿದರು. ಇಂತಹ ಮಕ್ಕಳ ಮದುವೆ ಮಾಡುವದರಿಂದ ಹಲವಾರು ರೀತಿಯ ಸಮಸ್ಯೆಗಳು ಎದುರಿಸಬೇಕಾಗುತ್ತದೆ ಹುಟ್ಟುವ ಮಕ್ಕಳು, ಅಂಗವಿಕಲ ಮಕ್ಕಳಾದ ಅಥವಾ ಬುದ್ದಿಮಾಂದ್ಯ ಮಕ್ಕಳಾಗಿ ಜನಿಸಬಹುದು ಎಂದರು ಗರ್ಭಾವ್ಯವಸ್ಥ ಸರಿಯಾಗಿ ಬೆಳವಣಿಗೆ ಇಲ್ಲದೆ ಇರುವುದರಿಂದ ತಾಯಿ-ಮಗು ಹೆರಿಗೆ ಸಮಯದಲ್ಲಿ ಮರಣ ಹೋಂದಬಹುದು ಎಂದರು. ಇಂತಹ ಘಟನೆಗಳು ನಡೆಯುವುದು ಕಂಡು ಬಂದಲ್ಲಿ ಮಕ್ಕಳ ಸಹಾಯವಾಣಿ(1098) ಕ್ಕೆ ಕರೆ ಮಾಡಿ ತಿಳಿಸಿ ಎಂದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅದ್ಯಕ್ಷರಾದ ಎಸ್.ಎಚ್.ಮಜೀದ್ ಮಾತನಾಡುತ್ತಾ ಇಂದಿನ ಮಕ್ಕಳು ಇಂದಿನ ಪ್ರಜೆಗಳು ಸಂವಿಧಾನ ಪರಿಚೇದ ಕಲಂ 5 ರಂತೆ ಇಂದಿನ ಮಕ್ಕಳು ಇಂದಿನ ಪ್ರಜೆಗಳು. ಇತ್ತಿಚಿನ ದಿನಗಳಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ ಶೇ 80 ರಷ್ಟು ಪ್ರಕರಣಗಳು ನೇರೆ ಹೋರೆಯವರಿಂದ ಹಾಗೂ ಪರಿಚಯಸ್ತರಿಂದಲೇ ನಡೆಯುತ್ತಿರುದು ವಿಷಾದಕರ ಸಂಗತಿಯಾಗಿದೆ ಮಕ್ಕಳು ಯಾವುದೆ ಆಸೆ ಆಮಿಷಗಳಿಗೆ ಬಲಿಯಾಗದೆ ತಮ್ಮನ್ನು ತಾವು ರಕ್ಷಿಸಿ ಕೊಳ್ಳಬೇಕೆಂದರು. ಪೊಕ್ಸೋ ಕಾಯ್ದೆ 2012 ರಲ್ಲಿ ಜಾರಿಗೆ ತರಲಾಗಿದೆ. ಮಹಿಳೆ ಮತ್ತು ಮಕ್ಕಳ ದೌರ್ಜನ್ಯ ಪ್ರಕರಣದಲ್ಲಿ ಕರ್ನಾಟಕ ರಾಜ್ಯ 2ನೇ ಸ್ಥಾನದಲ್ಲಿದೆ ಎಂದು ತಿಳಿಸಿದರು ಮಕ್ಕಳು ತಮ್ಮ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಹಾಗು ಸ್ಮಾರ್ಟ ಪೋನಗಳನ್ನು ಒಳ್ಳೆಯ ಕೇಲಸಕ್ಕೆ ಮಾತ್ರ ಬಳಕೆಮಾಡಿ ಆನಲೈನ ಗೆ ಮಾರುಹೊಗಿ ತೊಂದರೆಗೆ ಒಳಗಾಗಬೇಡಿ ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.
ಮಕ್ಕಳು ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಬೇಕು ಮಕ್ಕಳ ಹಕ್ಕುಗಳಿಂದ ಯಾರು ವಂಚಿತರಾಗಬಾರದು ಮಕ್ಕಳ ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಮುಖ್ಯ ಅತಿಥಿಗಳಾದ ಶ್ರೀಮತಿ ಗೀತಾ ಪಾಟೀಲ್ ಮಕ್ಕಳ ಸಹಾಯವಾಣಿ ನಿರ್ದೇಶಕರು ಹೇಳಿದರು.
ಬಾಲ್ಯ ವಿವಾಹ ನಿಷೇದ ಕಾಯ್ದೆ-2006 ಕುರಿತು ಮಕ್ಕಳ ಸಹಾಯವಾಣಿ ಸಿಬ್ಬಂದಿಯಾದ ಮಾರುತಿ ಹರಿಜನ ಉಪನ್ಯಾಸ ನೀಡಿದರು. ನಾಗರಾಜ ಕುರಿಯವರ ಸ್ವಾಗತಿಸಿದರು ಕರಬಸಪ್ಪ ಗುಡದಳ್ಳಿ ವಂದಿಸಿದರು. ಸುಮಾರು 80 ವಿದ್ಯಾರ್ಥಿಗಳು ಬಾಗವಹಿಸಿದ್ದರು.

  •  
  •  
  •  
  •  
  •  
  •  

Leave a Reply

Your email address will not be published. Required fields are marked *

Copyright © All rights reserved. | Developed by EXPOLOG TECHNOLOGIES
error: Content is protected !!