Sat. Jan 22nd, 2022

ಪಾಂಡವ ನ್ಯೂಸ್

ಸಮಾಜದ ಧ್ವನಿ

ಪ್ರತಿಭಾವಂತ ಮಕ್ಕಳಿಗೆ ಗೌರವಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎನ್.ಹುರಳಿ.

ಹಾನಗಲ್ಲ : ಭಾಷಾ ಕಲಿಕೆಯಲ್ಲಿ ಶಿಕ್ಷಕರು ಕಾಳಜಿಯಿಂದ ಸೇವೆ ಸಲ್ಲಿಸುವ ಅಗತ್ಯವಿದ್ದು ಹಾನಗಲ್ಲಿನ ಪ್ರೌಢ ಶಾಲಾ ಶಿಕ್ಷಕ ಪರಿವಾರ ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಮಕ್ಕಳ ಜ್ಞಾನಾಭಿವೃದ್ಧಿಗೆ ವಿಶೇಷ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎನ್.ಹುರಳಿ ತಿಳಿಸಿದರು.
ಹಾನಗಲ್ಲಿನ ಬಾಲಕಿಯರ ಪ್ರೌಢಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕರ ಸಂಘದ ಸಹಯೋಗದಲ್ಲಿ ಕಳೆದ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 125 ಕ್ಕೆ 125 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಪ್ರಾಥಮಿಕ ಪ್ರೌಢ ಹಂತದಲ್ಲಿ ಕಲಿಕೆಯನ್ನು ಶಿಕ್ಷಕರ ಶ್ರಮದಿಂದಲೇ ಮಾಡಬೇಕಾಗುತ್ತದೆ. ಈ ಮಕ್ಕಳಲ್ಲಿ ಭವಿಷ್ಯದ ಬಗೆಗೆ ಗುರಿ ನೀಡುವ ಮೂಲಕ ಒಳ್ಳೆಯ ಗುರುಗಳಾಗಿ ಮಾರ್ಗದರ್ಶ ಮಾಡುವ ಅಗತ್ಯವೂ ಇದೆ. ಪಾಲಕರು ಗುರುವೃಂದದ ಮೇಲೆ ಇಟ್ಟುರುವ ವಿಶ್ವಾಸವನ್ನು ಮರೆಯಬಾರದು ಎಂದರು.
ಆಶಯ ಮಾತುಗಳನ್ನಾಡಿದ ರಾಜ್ಯ ಸಂಪನ್ಮೂಲ ಶಿಕ್ಷಕ ನಿರಂಜನ ಗುಡಿ, ಹಾನಗಲ್ಲ ತಾಲೂಕಿನಲ್ಲಿ 62 ವಿದ್ಯಾರ್ಥಿಗಳು ಕಳೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 125 ಕ್ಕೆ 125 ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ. ಸಿರಿ ನುಡಿ ಪರೀಕ್ಷೆಯಲ್ಲಿ ಪೂರ್ಣಿಮಾತುರಮರಿ, ಸೌಜನ್ಯಾ ಪಾಟೀಲ, ಪುಟ್ಟಪ್ಪಜಾಧವ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕನ್ನಡ ಭಾಷಾ ಶಿಕ್ಷಕರ ನಿರಂತರ ಶ್ರಮದಿಂದಾಗಿ ಇಂತಹ ಯಶಸ್ಸು ಸಾಧ್ಯವಾಗಿದೆ. ಇಡೀ ಜಿಲ್ಲೆಯಾದ್ಯಂತ ಪ್ರೌಢಶಾಲಾ ಶಿಕ್ಷಕ ಸಮುದಾಯ ಮಕ್ಕಳ ಶ್ರೇಯೋಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸುತ್ತಿದ್ದು, ಇಡೀ ಶಿಕ್ಷಕ ಸಮುದಾಯಕ್ಕೆ ಅಭಿನಂದಿಸಲೇಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಭಾಷಾ ಶಿಕ್ಷಕರ ಸಂಘದಅಧ್ಯಕ್ಷ ಶ್ರೀಧಕ ಕೆ.ಎಚ್.ವಹಿಸಿದ್ದರು. ಮುಖ್ಯೋಪಾಧ್ಯಾಯರಾದ ವೇಂಕಟೇಶ ನಾಯಕ, ಸಿ.ಎಸ್. ಲಂಗಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ವಿದ್ಯಾರ್ಥಿನಿಯರಾದ ಸೌಜನ್ಯಾಕುಲಕರ್ಣಿ ಮತ್ತು ಅಂಜು ಗುಳಣ್ಣನವರ ಪ್ರಾರ್ಥಿಸಿದರು, ಶಿಕ್ಷಕರಾದ ಆರ್. ಎನ್. ಪಾಟೀಲ ಸ್ವಾಗತಿಸಿದರು, ಪ್ರಕಾಶ ಚಿಕ್ಕೇರಿ ವಂದಿಸಿದರು, ಶಶಿಕಲಾ ಹೊಸಳ್ಳಿ ಕಾರ್ಯಕ್ರಮ ನಿರೂಪಿಸಿದರು.

  •  
  •  
  •  
  •  
  •  
  •  

Leave a Reply

Your email address will not be published. Required fields are marked *

Copyright © All rights reserved. | Developed by EXPOLOG TECHNOLOGIES
error: Content is protected !!