Mon. Oct 11th, 2021

ಪಾಂಡವ ನ್ಯೂಸ್

ಸಮಾಜದ ಧ್ವನಿ

ಪ್ರಥಮ ಭಾರಿಗೆ ಸ್ವಕ್ಷೇತ್ರಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಅದ್ದೂರಿ ಸ್ವಾಗತ

1 min read

ಶಿಗ್ಗಾವಿ : ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿದ ಮೇಲೆ ಪ್ರಥಮಬಾರಿಗೆ ಸ್ವ ಕ್ಷೇತ್ರಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರನ್ನು ಕ್ಷೇತ್ರದ ಜನತೆ ಕೇಕೆ, ಚಪ್ಪಾಳೆ, ಶಿಳ್ಳೆಹೋಡೆದು, ಜೈಘೋಶ ಕೂಗುವಮೂಲಕ ಅದ್ಧೂರಿಯಾಗಿ ಬರಮಾಡಿಕೋಂಡರು.
ಶಿಗ್ಗಾವಿ-ಸವಣೂರ ಕ್ಷೇತ್ರದ ಮಾಜಿ ಶಾಸಕ ರಾಜಶೇಖರ ಸಿಂಧೂರ ನಿಧನರಾದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸ್ವ ಕ್ಷೇತ್ರಕ್ಕೆ ಆಗಮಿಸಿದ್ದರು. ಕ್ಷೇತ್ರ ಜನತೆಯ ಅದ್ದೂರಿ ಸ್ವಾಗತಕ್ಕೆ ಮನಸೋತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪೋಸ್ಟ್ ಸರ್ಕಲ್ ಹತ್ತಿರ ತಮ್ಮ ವಾಹನÀ ದಿಂದ ಇಳಿದು. ಜನರೊಂದಿಗೆ ಹೆಜ್ಜೆ ಹಾಕುವಮೂಲಕ ಜನಮನ್ನಣೆ ಗಳಿಸಿದರು. ಪ್ರಥಮಬಾರಿ ಆಗಮಿಸಿದ ತಮ್ಮ ಅಚ್ಚು ಮೇಚ್ಚಿನ ಮುಖ್ಯಮಂತ್ರಿಗಳನ್ನು ಅಫಾರ ಸಂಖ್ಯೆಯಲ್ಲಿ ಸೇರಿದ ಜನೋತ್ಸಮ ಹುಲಿ ಹೆಬ್ಬೂಲಿ, ರಾಜಾಹುಲಿ ಎಂಬ ಬಿರುದಾಂಕಿತಗಳಿಂದ ಜೈಘೋಷಹಾಕುವಮೂಲಕ ಸಂಭ್ರಮಿಸಿದರು. ಪಾದಯಾತ್ರೆಯೂದ್ದಕ್ಕೂ ನೆರೆದ ಜನತೆ ಹಾಗೂ ಅಭಿಮಾನಿಗಳು ಹೂ ಮಾಲೆ, ಹೂ ಗುಜ್ಜ ನೀಡಿ ತಮ್ಮ ನೆಚ್ಚಿನ ನಾಯಕನಿಗೆ ಶುಭಾಷಯಗಳನ್ನು ಕೋರಿದರು.
ನಂತರ ಪಾದಯಾತ್ರೆ ಮೂಲಕ ಸಂತೆ ಮೈದಾನಕ್ಕೆ ಆಗಮಿಸಿದ ಮುಖ್ಯಮಂತ್ರಿಗಳನ್ನು ಕೆಎಸ್‍ಆರ್‍ಪಿ 10ಪಡೆ ಮತ್ತು ಶಿಗ್ಗಾವಿ ಪೊಲೀಸ್‍ರು ಆಯೋಜಿಸಿದ್ದ ಗೌರವ ವಂದನೆ ಸ್ವೀಕರಿದರು. ನಂತರ ಸವಣೂರ ಪಟ್ಟಣದತ್ತ ಪ್ರಯಾಣ ಬೆಳೆಸಿದರು.
ಪ್ರಥಮ ಭಾರಿಗೆ ಪಟ್ಟಣಕ್ಕೆ ಮುಖ್ಯಮಂತ್ರಿಗಳು ಬರುವ ಸುದ್ದಿಯನ್ನು ತಿಳಿದು ಸಾವಿರಾರೂ ಅಭಿಮಾನಿಗಳು, ಸಾರ್ವಜನಿಕರು ಹಾಗೂ ಪಕ್ಷದ ಕಾರ್ಯಕರ್ತರು ಸವಣೂರ ಸರ್ಕಲ್ ಹಾಗೂ ಸಂತೆ ಮೈಧಾನದಲ್ಲಿ ಜಮಾಯಿಸಿದ್ದರು.
ಮುಖ್ಯಮಂತ್ರಿಗಳ ಜತೆಗೆ ಸಚಿವರಾದ ಬಿ.ಸಿ ಪಾಟೀಲ, ಸಿ.ಸಿ. ಪಾಟೀಲ, ಬಿಜೆಪಿ ತಾಲೂಕ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಶಿವಪ್ರಸಾದ ಸುರಗಿಮಠ, ನರಹರಿ ಕಟ್ಟಿ, ಬಸನಗೌಡ್ರ ರಾಮನಗೌಡ್ರ, ರಮೇಶ ವನಹಳ್ಳಿ, ಶ್ರೀಕಾಂತ ಬುಳ್ಳಕ್ಕನವರ ಸೇರಿದಂತೆ ಅನೇಕ ಮುಖಂಡರು. ಅಭಿಮಾನಿಗಳು ಉಪಸ್ಥಿತರಿದ್ದರು.

  •  
  •  
  •  
  •  
  •  
  •  

Leave a Reply

Your email address will not be published. Required fields are marked *

Copyright © All rights reserved. | Developed by EXPOLOG TECHNOLOGIES
error: Content is protected !!