Tue. Jan 18th, 2022

ಪಾಂಡವ ನ್ಯೂಸ್

ಸಮಾಜದ ಧ್ವನಿ

ರಾಜಕೀಯ ಪ್ರೇರಿತ ಹಿಂಸಾಚಾರ ಖಂಡಿಸಿ ತಹಸೀಲ್ದಾರರಿಗೆ ಮನವಿ

1 min read

ಪಾಂಡವ ನ್ಯೂಸ್, ರಾಣೇಬೆನ್ನೂರು : ಪಶ್ಚಿಮ ಬಂಗಾಳದ ರಾಜಕೀಯ ಪ್ರೇರಿತ ಹಿಂಸಾಚಾರ ಖಂಡಿಸಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಬುಧವಾರ ಗ್ರೇಡ್-2 ತಹಸೀಲ್ದಾರ ಅರುಣ ಅವರಿಗೆ ಮನವಿ ಸಲ್ಲಿಸಿದರು.
ಪಶ್ಚಿಮ ಬಂಗಾಳ ರಾಜ್ಯದಲ್ಲಿ ಜರುಗಿದ ವಿಧಾನಸಭಾ ಚುನಾವಣಾ ಫಲಿತಾಂಶದ ನಂತರ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಮಹಿಳಾ ಕಾರ್ಯಕರ್ತೆಯರ ಮೇಲೆ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಯತ್ನ ನಡೆಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಇದಲ್ಲದೆ ಹಿಂದೂಗಳಿಗೆ ಸೇರಿದ ಮಳಿಗೆಗಳ ಲೂಟಿ ಮಾಡುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ. ಇದು ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ರಾಜಕೀಯ ಅರಾಜಕತೆಗೆ ನಾಂದಿಯಾಗಿದೆ ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಉಮೇಶ ಹೊನ್ನಾಳಿ, ಗದಿಗೆಪ್ಪ ಹೊಟ್ಟಿಗೌಡ್ರ, ಯುವರಾಜ ಬಾರಾಟಕ್ಕಿ, ರಮೇಶ ಗುತ್ತಲ ಮತ್ತಿತರರಿದ್ದರು
ರಾಣೇಬೆನ್ನೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಪಶ್ಚಿಮ ಬಂಗಾಳದ ರಾಜಕೀಯ ಪ್ರೇರಿತ ಹಿಂಸಾಚಾರ ಖಂಡಿಸಿ ಗ್ರೇಡ್-2 ತಹಸೀಲ್ದಾರ ಅರುಣ ಅವರಿಗೆ ಮನವಿ ಸಲ್ಲಿಸಿದರು.

___________________________________________________________________________________________________________________________

ಕಸಾಪ ಮತದಾರರ ಪರಿಷ್ಕರಣೆಗೆ ಮೊದಲ ಕಂತಿನ ಮೃತ ಹತ್ತು ಸದಸ್ಯರ ಹಾವೇರಿ ಜಿಲ್ಲೆಯ ಮಾಹಿತಿ ರವಾನೆ http://pandavanews.com/kasapa-election-voters/

ನ್ಯಜ ಸುದ್ದಿಗಾಗಿ ಸಂಪರ್ಕಿಸಿ 9742789207 ಮತ್ತು ನಮ್ಮ web site pandavanews.com ಗೆ ಲಾಗಿನ್ ಮಾಡಿ

  •  
  •  
  •  
  •  
  •  
  •  

Leave a Reply

Your email address will not be published. Required fields are marked *

Copyright © All rights reserved. | Developed by EXPOLOG TECHNOLOGIES
error: Content is protected !!