Sat. Jan 22nd, 2022

ಪಾಂಡವ ನ್ಯೂಸ್

ಸಮಾಜದ ಧ್ವನಿ

ಕಮಲಾಪುರ ರೈತರಿಂದ ಬಿಸಿಪಿಗೆ ಸನ್ಮಾನ: ತಾಲೂಕಿನ ಸಮಗ್ರ ಅಭಿವೃದ್ಧಿಗೆ ಬದ್ಧ: ಬಿ.ಸಿ.ಪಾಟೀಲ್

ಪಾಂಡವ ನ್ಯೂಸ್,ರಟ್ಟೀಹಳ್ಳಿ: ತಾವು ತಾಲೂಕಿನ ಅಭಿವೃದ್ಧಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು, ಮತದಾರರ ಆಶೀರ್ವಾದದಿಂದ ತಾಲೂಕಿನಲ್ಲಿ ಅನೇಕ ಅಭಿವೃದ್ಧಿ ಕೆಲಸವನ್ನು ಮಾಡಿದ್ದೆನೆ ಎಂದು ಅನರ್ಹ ಶಾಸಕ ಬಿ.ಸಿ.ಪಾಟೀಲ್ ಹೇಳಿದರು.

ಅವರು ತಾಲೂಕಿನ ಕಮಲಾಪುರ ಗ್ರಾಮದಲ್ಲಿ ರೈತರು ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. 2 ವರ್ಷದ ಹಿಂದೆ ಕಮಲಾಪುರ ರೈತರ ಮೇಲೆ ಅರಣ್ಯ ಇಲಾಖೆಯಿಂದ ಸುಳ್ಳು ಕೇಸ್ ಹಾಕಿತ್ತು. ಈ ರೈತರ ಮೇಲಿನ ಕೇಸ್ ವಾಪಸ್ ಪಡೆಯುವಂತೆ ಈ ಹಿಂದಿನ ಇಬ್ಬರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರೂ ಕೇಸ್ ವಾಪಸ್ ತೆಗೆಯುವುದಕ್ಕೆ ಸಾಧ್ಯವಾಗಿರಲಿಲ್ಲ. ಆದರೆ ಈಗಿನ ಮುಖ್ಯಮಂತ್ರಿ ಮಂತ್ರಿ ಮತ್ತು ಗೃಹಮಂತ್ರಿಗಳನ್ನು ಭೇಟಿ ಮಾಡಿ ಕಮಲಾಪುರ ರೈತರ ಮೇಲಿನ ಕೇಸ್‍ನ್ನು ವಾಸಪ್ ತೆಗೆಸಬೇಕೆಂದು ಮನವಿ ಮಾಡಿದ್ದವು. ರೈತರ ಮೇಲಿನ ಕೇಸ್ ಹಿಂದೆ ಪಡೆದಿದ್ದಾರೆ. ತಾಲೂಕಿನ ರೈತರ ಪರವಾಗಿ ಮುಖ್ಯಮಂತ್ರಿಗಳಿಗೆ ಧನ್ಯವಾದ ಸಲ್ಲಿಸುತ್ತನೆ. ತಾಲೂಕಿನ ಸಮಗ್ರ ಅಭಿವೃದ್ಧಿಯೇ ನನ್ನ ಗುರಿ. ಮೊತ್ತಮ್ಮೆ ವಿಧಾನಸಭೆ ಪ್ರವೇಶ ಮಾಡಬೇಕಾದರೆ ತಾಲೂಕಿನ ಮತದಾರರ ಆಶಿರ್ವಾದ ಬೇಕು. ಆಶೀರ್ವಾದ ಮಾಡಿದರೆ ಮಂತ್ರಿ ಸ್ಥಾನ ಪಡೆದು ತಾಲೂಕನ್ನು ಇನ್ನು ಹೆಚ್ಚಿನ ಮಟ್ಟದಲ್ಲಿ ಅಭಿವೃದ್ಧಿ ಮಾಡಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾ.ಪಂ.ಸದಸ್ಯ ಚಂದ್ರಪ್ಪ ಸಾಸ್ವಿಹಳ್ಳಿ, ಗ್ರಾ.ಪಂ.ಸದಸ್ಯ ಗಜೇಂದ್ರ ಮಾಸ್ಟಿ, ರೇಣಕಪ್ಪ ಭರಮಗೌಡ್ರ, ನಾಗರಾಜ ತುಮ್ಮಿನಕಟ್ಟಿ, ಮಾಲತೆಶ ಸಣ್ಣಅಣಜಿ, ಮಂಜು ನಾಮದೇವ, ನಿಂಗಪ್ಪ ಮಾಸ್ಟಿ, ಭೀರಪ್ಪ ಕುರಿಯವರ, ಚಿದಾನಂದ ಅರ್ಕಾಚಾರಿ, ಬಸವರಾಜ ಕಾಲ್ವಿಹಳ್ಳಿ, ಸೃಷ್ಠಿ ಪಾಟೀಲ, ಕೆ.ಜಿ.ಪ್ರತಾಪ್, ಗುರುರಾಜ ಗೂಳಣ್ಣನವರ ಸೇರಿದಂತೆ ಹಲವು ಮುಖಂಡರು ಇದ್ದರು.

  •  
  •  
  •  
  •  
  •  
  •  

Leave a Reply

Your email address will not be published. Required fields are marked *

Copyright © All rights reserved. | Developed by EXPOLOG TECHNOLOGIES
error: Content is protected !!