Sat. Jan 22nd, 2022

ಪಾಂಡವ ನ್ಯೂಸ್

ಸಮಾಜದ ಧ್ವನಿ

ಗಾಂಧೀ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ಆಚರಣೆ

ಪಾಂಡವ ನ್ಯೂಸ್,ರಟ್ಟೀಹಳ್ಳಿ : ತಾಲೂಕಿನ ಮಾಸೂರು ಗ್ರಾಮದ ಶ್ರೀ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಇಂದು ಗಾಂದೀಜಿಯವರ 151ನೇ ಜನ್ಮ ದಿನಾಚರಣೆ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀರವರ ಜಯಂತಿಯನ್ನು ಆಚರಿಸಲಾಯಿತು.
ಇಂದು ಮಾಸೂರಿನ ಬಸ್ಟ್ಯಾಂಡ್ ಹಾಗೂ ಸರ್ವಜÐನ ಪುತ್ಥಳಿಯ ಮತ್ತು ಸರ್ಕಾರಿ ಆಸ್ಪರ್ತೆ ಹತ್ತಿರ ಸಂಸ್ಥೆಯ ಪ್ರಾಥಮಿಕ ಪ್ರೌಢಶಾಲಾ ಹಾಗೂ ಪದವಿ ಪೂರ್ವ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಸ್ವಚ್ಛತಾ ಆಂದೋಲನ ನಡೆಸಿದರು.

ನಂತರ ಶಾಲೆಯ ಸಭಾಭವನದಲ್ಲಿ ಕಾರ್ಯಕ್ರಮ ನಡೆಯಿತು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಆಡಳಿತಾಧಿಕಾರಿ ಹ ಮು ತಳವಾರ ಮಾತನಾಡಿ ಸ್ವಾತಂತ್ರಯ ತಂದು ಕೊಡುವಲ್ಲಿ ಅವಿರತ ಶ್ರಮ ವಹಿಸಿದ ಮಹನೀಯ ಶ್ರೀ ಮಹಾತ್ಮ ಗಾಂಧೀಜಿಯವರು ಹಾಗೂ ಲಾಲ ಬಹದ್ದೂರ ಶಾಸ್ತ್ರೀರವರು, ಜನಸಾಮಾನ್ಯರಾಗಿ ಹುಟ್ಟಿ ಸರಳ ನೇರ ನುಡಿ ಗಳೊಂದಿಗೆ ಬೆಳದವರು, ಗಾಂಧೀಜಿ ಸತ್ಯ ಶಾಂತಿ ಅಹಿಂಸಿ ಎಂಬ ಅಸ್ತ್ರಗಳಿಂದ ಶತ್ರುಗಳನ್ನು ಮಣಿಸಿ ಸ್ವಾತಂತ್ರಯ ದೊರಕಿಸಿಕೊಟ್ಟರು ಎಂದು ಹೇಳಿದರು.ಜಯಂತಿಯ ಪ್ರಯುಕ್ತ ಸ್ವಚ್ಛ ಭಾರತ ಕಾರ್ಯಕ್ರಮ ಹಾಗೂ ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಪ್ರಧಾನಿಯವರು ಕರೆ ನೀಡಿದ್ದಾರೆ ಆದ ಕಾರಣ ನಾವೆಲ್ಲರೂ ಸೇರಿ ಪ್ರಧಾನಿಯವರ ಕಾರ್ಯಕ್ಕೆ ಕೈ ಜೋಡಿಸಿ ಸ್ವಚ್ಛತೆ ಮೂಲಕ ಆರೋಗ್ಯ ವೃದ್ಧಿಸುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಹಾಗೂ ಮಾಸೂರಿನಲ್ಲಿ ಪ್ರತೀ ವರ್ಷ ನಮ್ಮ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಮತ್ತು ಸಿಬ್ಬಂದಿ ವರ್ಗದವರಿಂದ ಸ್ವಚ್ಛ ಭಾರತ ಅಬಿಯಾನ ಮಾಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು.

ಪ್ರಾಚಾರ್ಯ ಚಂದ್ರಶೇಖರ ಪಿ ಮಾತನಾಡಿ ನಾಮದೇವ ರವರು ಮಾತನಾಡಿ ಸಾಧನೆ ಮಾಡಿದ ಸಾಧಕರ ಮಾರ್ಗದರ್ಶನದಲ್ಲಿ ನಾವು ನಡೆಯಬೇಕು.ಭವ್ಯ ಬಾರತವನ್ನು ನಿರ್ಮಿಸಲು ಯುವಕರೆಲ್ಲರೂ ಮುಂದಾಗಬೇಕು ಎಂದು ಹೇಳಿದರು.
ಮುಖ್ಯೋಪಾದ್ಯಾಯ ಗಣೇಶ ಕರೆಮುದುಕರ ಮಾತನಾಡಿ 1ಭಾರತ ದೇಶವು ಕಂಡ ಇಬ್ಬರು ದಿಗ್ಗಜರಲ್ಲಿ ಮಹಾತ್ಮ ಗಾಂಧಿಯವರು ಒಬ್ಬರು.ಸಮಗ್ರ ಭಾರತ ನಿರ್ಮಾಣದ ಕನಸುಗಳನ್ನು ಮಹಾನ್ ವ್ಯಕ್ತಿಗಳು ಬಿಟ್ಟು ಹೋಗಿದ್ದಾರೆ ಅವುಗಳನ್ನು ನನಸು ಮಾಡುವ ಕೆಲಸ ನಮ್ಮದು.ಎಂದು ಹೇಳಿದರು

ಈ ಸಂದರ್ಭದಲ್ಲಿ ಮುಖ್ಯೋಪಾದ್ಯಾಯಿನಿ ನಂದಿನಿ ಹೆಚ್ ಜಿ, ಪ್ರತಿಕಾ ಶೆಟ್ಟಿ, ಚೇತನ ಬಿ ಸಿ, ಟಿ ಕೆ ನಾಮದೇವ, ಶೃತಿ ಬೂದಿಹಾಳಮಠ, ನಜರೀನ ಪಿ, ಮಂಗಳಾ, ಶಿಲ್ಪಾ, ದೀಪಿಕಾ, ಹಾಗೂ ಎಲ್ಲಾ ಸಿಬ್ಬಂದಿವರ್ಗದವರು ಮತ್ತು ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಾಜರಿದ್ದರು

  •  
  •  
  •  
  •  
  •  
  •  

Leave a Reply

Your email address will not be published. Required fields are marked *

Copyright © All rights reserved. | Developed by EXPOLOG TECHNOLOGIES
error: Content is protected !!