Sun. Jan 16th, 2022

ಪಾಂಡವ ನ್ಯೂಸ್

ಸಮಾಜದ ಧ್ವನಿ

ಮೂರು ಕೃಷಿ ಕಾಯ್ದೆ ವಾಪಸ್ ಇಂದು ರೈತರ ಸಂಭ್ರಮದ ವಿಜಯೋತ್ಸವದಲ್ಲಿ ಪಾಲ್ಗೊಳ್ಳಲು ಕರೆ

1 min read

ರಾಣೇಬೆನ್ನೂರು : ಕೇದ್ರದ ಮೋದಿ ಸರ್ಕಾರವು ರೈತರ ಭಾರಿ ವಿರೋಧದ ನಡುವೆಯೂ ಜಾರಿಗೆಗೊಳಿಸಲು ಪ್ರಯತ್ನಿಸಿದ ಮೂರು ಕೃಷಿ ಮಸೂಧೆತಿದ್ದುಪಡಿಕಾಯ್ದೆಯನ್ನು 375 ದಿನಗಳ ನಿರಂತರ ಹೋರಾಟಕ್ಕೆ ಮಣಿದ ಸರ್ಕಾರ ಕೃಷಿ ಕಾಯ್ದಯನ್ನು ವಾಪಸ್ ಪಡೆದಿರುವುದುರೈತರ ಹೋರಾಟಕ್ಕೆ ಸಿಕ್ಕ ಜಯವಾಗಿದೆ.
ನಿರಂತರ ಈ ಹೋರಾಟಕ್ಕೆ ಅನೇಕ ಸಂಘ ಸಂಸ್ಥೆಯವರು, ಕನ್ನಡ ಪರ ಸಂಘಟನೆಯವರು, ರೈತ ಪರ ಸಂಘಟನೆಯವರು, ರಾಷ್ಟ್ರೀಯ ಮತ್ತು ಪ್ರಾದೇಶಿಕ ರಾಜಕೀಯ ಪಕ್ಷದವರು ಬೆಂಬಲ ಸೂಚಿಸಿ ರೈತರೊಂದಿಗೆ ಕೈಜೋಡಿಸಿದ್ದು ಅಲ್ಲದೆ ಸಹಕಾರ ನೀಡಿದ್ದು ಇರುತ್ತದೆ. 23-11-2021 ರ ಮಂಗಳವಾರ ಬೆಳಗ್ಗೆ 11 ಗಂಟೆಗೆ ರಾಣೇಬೆನ್ನೂರು ನಗರದ ಕೆಇಬಿ ಗಣೇಶ ದೇವಸ್ಥಾನದಿಂದ ರೈತರ ಸಂಭ್ರಮದ ವಿಜಯೋತ್ಸವದ ಮರೆವಣಿಗೆ ನಡೆಯಲಿದ್ದು ಈ ಮೆರವಣಿಗೆ ಕೆಇಬಿ ಗಣೇಶದೇವಸ್ಥಾನದಿಂದ ಪ್ರಾರಂಭವಾಗಿ ಪೋಸ್ಟ್ ಸರ್ಕಲ್ ವರೆಗೆ ತೆರಳುವುದು. ಕಾರಣ ಈ ಹೋರಾಟಕ್ಕೆ ಬೆಂಬಲ ನೀಡಿದ ಎಲ್ಲ ರಾಜಕೀಯ ಪಕ್ಷದವರು, ಎಲ್ಲ ಕನ್ನಡಪರ, ರೈತ ಪರ ಸಂಘಟನೆಗಳು, ಸ್ತೀಶಕ್ತಿ ಸಂಘಟನೆಗಳು, ವರ್ತಕರು, ಹೋಟೆಲ್ ಉದ್ಯಮದಾರರೆಲ್ಲೂರು ಈ ಒಂದು ರೈತರ ಅಭೂತ ಪೂರ್ವವಾದ ವಿಜಯೋತ್ಸವದಲ್ಲಿ ಪಾಲ್ಗೊಳ್ಳಬೇಕೆಂದು ರೈತ ಸಂಘಟನೆ ಪರವಾಗಿ ರವೀಂದ್ರಗೌಡಎಫ್. ಪಾಟೀಲ, ಈರಣ್ಣ ಹಲಗೇರಿ, ಸುರೇಶಪ್ಪಗರಡಿಮನಿ, ಸುರೇಶ ಮಲ್ಲಾಪುರ, ದಿನೇಶ ಗೌಡರ, ಎಸ್.ಡಿ. ಹಿರೇಮಠ, ಬಸವರಾಜಕೊಂಗಿಯವರು ಕೋರಿದ್ದಾರೆ.

  •  
  •  
  •  
  •  
  •  
  •  

Leave a Reply

Your email address will not be published. Required fields are marked *

Copyright © All rights reserved. | Developed by EXPOLOG TECHNOLOGIES
error: Content is protected !!